ನಮ ಯುವ ಪೀ�ಿಗೆಯ ಮನಸ್ಸಿನಲ್ಲಿ ಕನ್ನಡಾಭಿಮಾನವನ್ನು ಬಿತ್ತುವ ಹಾಗೂ ಕನ್ನಡ ಭಾಷೆಯನ್ನು ಉಳಿಸಿ- ಬೆಳೆಸುವ ಜವಾಬ್ದಾರಿಯನ್ನು ನಮ್ಮ ಪ್ರೆಸಿಡೆನ್ಸಿ ಕಾಲೇಜು ೨೦೦೧ ರಲ್ಲಿ ಕಾಯಾ- ವಾಚಾ- ಮನಸ್ಸಿನಿಂದ ಪ್ರತಿಭಾನ ಕನ್ನಡ ಸಂಘವನ್ನು ಕಟ್ಟಲಾಯಿತು ( ಪ್ರತಿಭಾನ ಎಂದರೆ ಕವಿತ್ವದ ಬೀಜ) ಈ ಸಂಘವು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ಈ ಸಂಘ ಪ್ರತಿ ವರ್ಷವೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹಾಗೂ ಕನ್ನಡ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿ, ನೆಲ, ಜಲ, ಕಲೆಯನ್ನು ಬೆಳೆಸುವ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮ, ಪ್ರಬಂಧ ಬರೆಸುವುದು, ಆಂಗ್ಲ ಪದಗಳಿಗೆ ಕನ್ನಡ ಅರ್ಥ ಹೇಳಿಸುವುದು ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವುದಲ್ಲದೆ ಕನ್ನಡ ಹಬ್ಬವನ್ನು ಆಚರಿಸುವುದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೂ ನಮ್ಮ ನಾಡಿನ ಸಾಹಿತಿಗಳು, ಇತಿಹಾಸಕಾರರು, ಕಲಾವಿದರು, ವಿಜ್ಞಾನಿಗಳು ,ಚಲನ ಚಿತ್ರ ನಟರು, ಸಂಗೀತಗಾರರು, ರೈತಪರ ಹೋರಾಟಗಾರರು ಮುಂತಾದ ದಿಗ್ಗಜರನ್ನು ಕನ್ನಡ ಹಬ್ಬಕ್ಕೆ ಆಹ್ವಾನಿಸಿ ಗೌರವಿಸುವುದು ಈ ಸಂಘದ ಉದ್ದೇಶವಾಗಿದೆ.
ಜೈ ಕರ್ನಾಟಕ